ಒಬ್ಬನಿಗೆ ರೂಹಿಲ್ಲ, ಒಬ್ಬನಿಗೆ ರೂಹುಂಟು,
ಒಬ್ಬನ ರೂಹು ಹೋಗುತ್ತ ಬರುತ್ತದೆ.
ಮೂವರನೊಂದೆಡೆಗೆ ತಂದಡೆ
ಏನಹರೆಂಬುದ ನೋಡಿಕೊಳ್ಳಿರಣ್ಣಾ.
ಕಂಡಡೆ ಉಣಲಿಲ್ಲ, ಕಾಣದಿರ್ದಡೆ ಉಣದಿರಲಿಲ್ಲ.
ಇದೇನು ಸೋಜಿಗವಯ್ಯಾ ಸೌರಾಷ್ಟ್ರ ಸೋಮೇಶ್ವರಾ.
Art
Manuscript
Music
Courtesy:
Transliteration
Obbanige rūhilla, obbanige rūhuṇṭu,
obbana rūhu hōgutta baruttade.
Mūvaranondeḍege tandaḍe
ēnaharembuda nōḍikoḷḷiraṇṇā.
Kaṇḍaḍe uṇalilla, kāṇadirdaḍe uṇadiralilla.
Idēnu sōjigavayyā saurāṣṭra sōmēśvarā.