Index   ವಚನ - 98    Search  
 
ಕಂಡುದ ಕಂಡು ಕೈಕೊಂಬರಲ್ಲದೆ, ಕಾಣದುದ ಕಂಡು ಕೈಕೊಂಬುವರಿಲ್ಲ ನೋಡಯ್ಯಾ. ಹಿಡಿದವರ ಕಂಡು ಹಿಡಿವರೈಸಬಲ್ಲದೆ ಹಿಡಿಯೊಡೆದು ಹೋದುದನಾರೂ ಹಿಡಿವರಿಲ್ಲಯ್ಯಾ. ಪೂಜಿಸುವರ ಕಂಡು ಪೂಜೆಗೆಯ್ವರಲ್ಲದೆ ಪೂಜೆರಹಿತವಾದ ಪೂಜ್ಯನನಾರೂ ಪೂಜಿಸುವರಿಲ್ಲ ನೋಡಯ್ಯಾ. ರೂಪನರ್ಪಿಸುವರಲ್ಲದೆ ರುಚಿಯನರ್ಪಿಸುವರಿಲ್ಲಯ್ಯಾ. ಇದರಂತುವನಾರು ಬಲ್ಲರಯ್ಯಾ, ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರಲ್ಲದೆ?

C-512 

  Tue 13 Feb 2024  

 Explanation needed
  Shivanand N Arabhavi
Bailhongal