Index   ವಚನ - 103    Search  
 
ಕಣ್ಣು ತನ್ನ ತಾ ಕಾಣಲರಿಯದಂತೆ, ಹಣ್ಣು ತನ್ನ ರುಚಿಯ ತಾನರಿಯದಂತೆ, ಉರಿ ತನ್ನ ಉಷ್ಣವ ತಾನರಿಯದಂತೆ, ಬಯಲು ತನ್ನ ತೆರಪ ತಾನರಿಯದಂತೆ, ಲಿಂಗೈಕ್ಯ ತನ್ನೊಳಗಳ ಲಿಂಗವ ತಾನರಿಯದಂತೆ, ನಾ ಸತ್ತನೆಂಬ ಹೆಣನಿಲ್ಲವಾಗಿ. ತನ್ನ ಮರೆದು ಲಿಂಗವ [ಮೆ]ರೆದ ಲಿಂಗೈಕ್ಯರು ಸೌರಾಷ್ಟ್ರ ಸೋಮೇಶ್ವರನಲ್ಲಿ, ಅನುಭಾವವ ಮಾಡಲಿಲ್ಲ; ನುಡಿದು ಹೇಳಲಿಲ್ಲ; ನಡೆದು ತೋರಲಿಲ್ಲ.