ಕರ್ಮವಶದಿಂದುದಯಿಸಿದ ಶರೀರವ
ಕರ್ಮದ್ವಯಂಗಳಲ್ಲಿ ಲೇಪವಾಗದೆ
ನೀರ ತಾವರೆಯಂತೆ ನಿಲೇಱಪವಾದುದದಕ್ಕೆ ಶ್ರುತಿ:
ಯಥಾ ಪುಷ್ಕರಪಣಂ ಆಪೋ ನ ಶ್ಲಿಷ್ಯತಿ
ಇಂತೆಂದುದಾಗಿ,
ಜ್ಯೋತಿಷ್ಟೋಮ ಬ್ರಹ್ಮಹತ್ಯೆ ಮೊದಲಾದ
ಸಂಚಿತ ಪ್ರಾರಬ್ದ ಆಗಾಮರಹಿತರು.
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು.
Art
Manuscript
Music
Courtesy:
Transliteration
Karmavaśadindudayisida śarīrava
karmadvayaṅgaḷalli lēpavāgade
nīra tāvareyante nilēṟapavādudadakke śruti:
Yathā puṣkarapaṇaṁ āpō na śliṣyati
intendudāgi,
jyōtiṣṭōma brahmahatye modalāda
san̄cita prārabda āgāmarahitaru.
Saurāṣṭra sōmēśvarā nim'ma śaraṇaru.