Index   ವಚನ - 109    Search  
 
ಕಲ್ಲಿನಲ್ಲಿ ಕನಕ ಒಗೆದಡೆ ಕನಕ ಕಲ್ಲಿಂಗೆ ಕಿಂಕರನಪ್ಪುದೆ? ಶುಕ್ತಿಯಲ್ಲಿ ಮೌಕ್ತಿಕ ಒಗೆದಡೆ ಮೌಕ್ತಿಕ ಶುಕ್ತಿಗೆ ಕಿಂಕರನಪ್ಪುದೆ? ಧರೆಯಲ್ಲಿ ಸುರತರು ಒಗೆದಡೆ ಸುರತರು ಧರೆಗೆ ಕಿಂಕರನಪ್ಪುದೆ? ಜನನಿಯುದರದಲ್ಲಿ ಘನಶರಣ ಒಗೆದಡೆ ಜನನಿ ಜನಕಂಗೆ ಕಿಂಕರನಪ್ಪ[ನೆ]? ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು ಸ್ವತಂತ್ರಶೀಲರಗ್ರಗಣ್ಯರು.