ಕಾಮಂಗೆ ಕೈತಲೆಗೊಟ್ಟ ಕೈವಾರಿಗಳಿಗೆಲ್ಲಿಯದೊ, ಕೈವಲ್ಯ ಪದವಿ?
ಕಾಲಂಗೆ ಕಾಯವನೊಪ್ಪಿಸಿಕೊಟ್ಟ ಕಾಮುಕರಿಗೆಲ್ಲಿಯದೊ,
ಕೈಲಾಸದ ಬಟ್ಟೆ?
ಕರ್ಮಕಪಟದ ಕಮ್ಮರಿಯೊಳು ಸಿಲುಕಿ ಕಳವಳಿಸುತಿರ್ಪ
ಕರ್ಮಕಾಂಡಿಗಳಿಗೆಲ್ಲಿಯದೊ, ಸ್ವರ್ಗಾಪವರ್ಗ?
ಸೌರಾಷ್ಟ್ರ ಸೋಮೇಶ್ವ[ರ] ಲಿಂಗದ ನಿಜವನರಿಯದ
ಕುಜನರಿಗೆಲ್ಲಿಯದೊ ನಿತ್ಯಾನಂದ ನಿಜಸುಖ?
Art
Manuscript
Music
Courtesy:
Transliteration
Kāmaṅge kaitalegoṭṭa kaivārigaḷigelliyado, kaivalya padavi?
Kālaṅge kāyavanoppisikoṭṭa kāmukarigelliyado,
kailāsada baṭṭe?
Karmakapaṭada kam'mariyoḷu siluki kaḷavaḷisutirpa
karmakāṇḍigaḷigelliyado, svargāpavarga?
Saurāṣṭra sōmēśva[ra] liṅgada nijavanariyada
kujanarigelliyado nityānanda nijasukha?