Index   ವಚನ - 113    Search  
 
ಕಾಮಧೇನು ಕಾಮಿಸಿದಲ್ಲದೆ ಈಯಲರಿಯದು, ಕಲ್ಪವೃಕ್ಷ ಕಲ್ಪಿಸಿದಲ್ಲದೆ ಈಯಲರಿಯದು, ಚಿಂತಾಮಣಿ ಚಿಂತಿಸಿದಲ್ಲದೆ ಈಯಲರಿಯದು, ತವನಿಧಿ ತೆಗೆದಲ್ಲದೆ ಈಯಲರಿಯದು, ನವನಿಧಿ ಬಯಸಿದಲ್ಲದೆ ಕೊಡಲರಿಯದು, ಕಾಮಿಸದೆ ಕಲ್ಪಿಸದೆ ಚಿಂತಿಸದೆ [ತೆಗೆಯದೆ] ಬಯಸದೆ ಎನ್ನನೀವುದಕ್ಕೆ ಮುನ್ನವೆ ತನ್ನನಿತ್ತ ಸೌರಾಷ್ಟ್ರ ಸೋಮೇಶ್ವರಲಿಂಗವ ಕಂಡೆ.