Index   ವಚನ - 121    Search  
 
ಕಾಯವೆಂಬ ಕಲ್ಲಮೇಲೆ ಮನವೆಂಬ ಮಚ್ಚವ ಸದ್ಭಾವವೆಂಬ ಹಸ್ತದಿಂ ಪಿಡಿದೊರೆದು, ಪರಬ್ರಹ್ಮದ ಬಣ್ಣಕ್ಕೆ ಅದ್ವೈತದ ಅಣಿಯನಿಟ್ಟು, ನಿರ್ಧರಿಸಿದ ನಿಜಬಣ್ಣವ ನಿಜದಿಂ ಕಂಡು ಇಹುದಿಲ್ಲ. ಬಹುದು ಬಾರದೆಂಬ ಬಹು ಬಣ್ಣದ ಬಳಕೆಯಳಿದ ಸಹಜ ನೀನೆ, ಸೌರಾಷ್ಟ್ರ ಸೋಮೇಶ್ವರಾ.