Index   ವಚನ - 122    Search  
 
ಕಾಯದಲ್ಲಿ ಜೀವಪ್ರಚ್ಛನ್ನವೆಂದಡೆ ಸರ್ವಾಂಗಕ್ಕೆ ಚೇತನವಾಗಿಪ್ಪುದಾಗಿ ಪ್ರಚ್ಛನ್ನವಲ್ಲ. ಜಗದಲ್ಲಿ ಜೀವ ಪರಿಪೂರ್ಣದೆಂದಡೆ `ಯುದ್ಧøಷ್ಟಂ ತನ್ನಷ್ಟ' ವೆಂದುದಾಗಿ, ಕಾಯದಿಂ ಜೀವ ತೊಲಗುವ ದೆಸೆಯಿಂ ಪರಿಪೂರ್ಣವಲ್ಲ. ಇದಕ್ಕೆ ಶ್ರುತಿ: ಕಾಯಮಾಕಾರಯುಕ್ತಂತು ಜೀವೋ ರೂಪವಿವರ್ಜಿತಃ ಕಾಯಜೀವದ್ವಯೈರ್ಯುಕ್ತಂ ನ ಧ್ರುವಂ ಪರಮೇಶ್ವರಿ ಇಂತೆಂದುದಾಗಿ, ಜೀವಂಗೆ ಜೀವವಾದಾತ್ಮನೆ ಪರಮಾತ್ಮನೆಂಬ ಉಪಮೆಗುಪಮಾತೀತ, ಭಾವಕ್ಕೆ ಭಾವಾತೀತ, ಅರುವಿಂಗೆ ಅಗೋಚರ, ಅತಕ್ರ್ಯನಗಣಿತನಪ್ರಮೇಯ ನಿತ್ಯನಿರಂಜನ ನೀನೆ, ಸೌರಾಷ್ಟ್ರ ಸೋಮೇಶ್ವರಾ.