ಕಾಳ ರಕ್ಕಸಿಗೆ ಮೂರು ಬೆನ್ನು, ಐದು ಬಸುರು,
ಆರು ಕಣ್ಣು, ಏಳು ಮೊಲೆ, ಎಂಟು ಭುಜ,
ಹತ್ತು ತೋಳು, ಹದಿನಾರು ಪಾದ, ಹದಿನೆಂಟು ತಲೆ,
ಮೂವತ್ತಾರು ಬಾಯಿ, ಐವತ್ತೆರಡು ನಾಲಗೆ,
ಅರುವತ್ತುನಾಲ್ಕು ಕೋರೆದಾಡೆ.
ಈ ಪರಿಯಲ್ಲಿ ಜಗವೆಲ್ಲವನಗಿದಗಿದು
ಉಗುಳುತ್ತಿರ್ದಳಯ್ಯಾ,
ಸೌರಾಷ್ಟ್ರ ಸೋಮೇಶ್ವರಾ,
ನೀ ಮುಟ್ಟೆ ಬಟ್ಟಬಯವಾದಳು.