Index   ವಚನ - 128    Search  
 
ಕುಂಡಲಿಯ ಮುಖದಲ್ಲಿ ಪ್ರಾಣನಿವಾಸಿಯಾಗಿಪ್ಪ ಪಶ್ಚಿಮದ್ವಾರದ ಬ್ರಹ್ಮವಿಷ್ಣುರುದ್ರರ ಅಧೋನಾಳ ಮಧ್ಯನಾಳ ಊಧ್ರ್ವನಾಳಮಂ ಕಳೆದು, ಶೂನ್ಯಸ್ಥಾನದ ಹೂವಿನ ಪರಿಮಳದ ಚಿತ್ಪದಾಂಬುವ ಧರಿಸಿ, ಮನಮಗ್ನನಾಗಿ, ಪ್ರಾಣಲಿಂಗವೆಂಬ ಸಂದು ನಷ್ಟವಾದಿರವ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣ ಬಲ್ಲ.