Index   ವಚನ - 139    Search  
 
ಗಂಧಘ್ರಾಣ ಆಚಾರಲಿಂಗಸಹಿತ ಲಿಂಗಾರ್ಪಿತ, ಜಿಹ್ವೆರಸ ಗುರುಲಿಂಗಸಹಿತ ಲಿಂಗರ್ಪಿತ, ನೇತ್ರರೂಪು ಶಿವಲಿಂಗಸಹಿತ ಲಿಂಗಾರ್ಪಿತ, ತ್ವಕ್ಕುಸ್ವರುಶನ ಜಂಗಮಲಿಂಗಸಹಿತ ಲಿಂಗಾರ್ಪಿತ, ಶ್ರೋತ್ರಶಬ್ದ ಪ್ರಸಾದಲಿಂಗಸಹಿತ ಲಿಂಗಾರ್ಪಿತ, ಆತ್ಮತೃಪ್ತಿ ಮಹಾಲಿಂಗಸಹಿತ ಲಿಂಗಾರ್ಪಿತ. ಇದಕ್ಕೆ ಶ್ರುತಿ: ಲಿಂಗದೃಷ್ಟ್ಯಾ ನಿರೀಕ್ಷರ ಸ್ಯಾತ್ ಲಿಂಗಹಸ್ತೇನ ಸ್ಪರ್ಶನಂ ಲಿಂಗಜಿಹ್ವಾರಸಾಸ್ವಾದೋ ಲಿಂಗಘ್ರಾಣೇನ ಘ್ರಾತಿತೇ ಲಿಂಗಶ್ರೋತ್ರೇಣ ಶ್ರವಣಂ ಲಿಂಗಸ್ಯೇನೋಕ್ತಿರುಚ್ಯತೇ ಲಿಂಗನಾನಗತಂ ಸರ್ವಂ ಇತ್ಯೇತ್ಸಹ ಭಾಜನಂ ಇಂತೆಂದುದಾಗಿ, ಷಡುಸ್ಥಲಬ್ರಹ್ಮ ಲಿಂಗಾಂಗದಿಂ ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗ [ಅಂ]ಗವನೊಳಕೊಂಡಿತ್ತಾಗಿ ಅಂಗವೇ ಲಿಂಗವಾಯಿತು ನೋಡಾ.