Index   ವಚನ - 156    Search  
 
ಘಟವ ಮಾಡಿದ ಕುಲಲಾನು ಆ ಘಟದೊಳಿಪ್ಪುದಿಲ್ಲವೆಂತಂತೆ, ಬೆಳಸ ಬಿತ್ತಿದವನು ಆ ಬೆಳೆಯೊಳಿಪ್ಪುದಿಲ್ಲವೆಂತಂತೆ, ರಥವ ಮಾಡಿದ ರಥಿಕ ತಾ ಆ ರಥದೊಳಿಪ್ಪುದಿಲ್ಲವೆಂತಂತೆ, ಸರ್ವವನಾಡಿಸುವ ಶರ್ವನು ಯಂತ್ರ ಯಂತ್ರಿಯಂತಿರ್ಪನಾಗಿ ಸರ್ವರೂ ಶಿವನೆಂಬ ಅಜ್ಞಾನಿಗಳ ಮೆಚ್ಚುವನೆ? ನಮ್ಮ ಸೌರಾಷ್ಟ್ರ ಸೋಮೇಶ್ವರ.