Index   ವಚನ - 169    Search  
 
ಚೌಷಷ್ಠಿ ವಿದ್ಯೆಗಳ ಕಲಿತಡೇನೊ? ಅಷ್ಟಾಷಷ್ಠಿಕ್ಷೇತ್ರಂಗಳ ಮೆಟ್ಟಿದಡೇನೊ? ಬಿಟ್ಟಡೇನೊ? ಕಟ್ಟಿದಡೇನೊ? ಅರಿವಿನಾಚಾರ ಕರಿಗೊಳ್ಳದನ್ನಕ್ಕ. ಘನಲಿಂಗದ ಬೆಳಗು ಸ್ವಯವಾದ ಶರಣಂಗಲ್ಲದೆ ಸೌರಾಷ್ಟ್ರ ಸೋಮೇಶ್ವರಲಿಂಗಸುಖವೆಡೆಗೊಳ್ಳದು.