ಜಗಭರಿತಲಿಂಗ ಶರಣಭರಿತಲಿಂಗ ನಾಮರಹಿತಲಿಂಗ:
ಜಗಭರಿತಲಿಂಗವೆಂದು,
`ಸರ್ವಂ ಖಲ್ವಿದಂ ಬ್ರಹ್ಮ' ವೆಂಬ ವಿಶ್ವಬ್ರಹ್ಮ.
ಶರಣಭರಿತಲಿಂಗವೆಂದು,
`ಏಕ ಏವ ದೇವೋ ನ ದ್ವಿತೀಯಃ' ವೆಂಬ ತಾರಕಬ್ರಹ್ಮ.
ನಾಮರಹಿತಲಿಂಗವೆಂದು,
`ಚಕಿತಮಬ್ಥಿಧತ್ತೇ ಶ್ರುತಿರಪಿ' ಯೆಂಬ ಪರಬ್ರಹ್ಮ.
ಇಂತೀ ತ್ರಿವಿಧಬ್ರಹ್ಮ ಏಕಬ್ರಹ್ಮ ನೀನೇ
ಸೌರಾಷ್ಟ್ರ ಸೋಮೇಶ್ವರಾ.
Art
Manuscript
Music
Courtesy:
Transliteration
Jagabharitaliṅga śaraṇabharitaliṅga nāmarahitaliṅga:
Jagabharitaliṅgavendu,
`sarvaṁ khalvidaṁ brahma' vemba viśvabrahma.
Śaraṇabharitaliṅgavendu,
`ēka ēva dēvō na dvitīyaḥ' vemba tārakabrahma.
Nāmarahitaliṅgavendu,
`cakitamabthidhattē śrutirapi' yemba parabrahma.
Intī trividhabrahma ēkabrahma nīnē
saurāṣṭra sōmēśvarā.