Index   ವಚನ - 178    Search  
 
ಜ್ಞಾನಕಾಯಂಗೆ ಬಹುಕಾಯವಿಲ್ಲ, ಅರುಹಿನ ಮುಂದಣ ಕುರುಹು ಅರುವನಗ್ರಹಿಸಿ ಜ್ಞಾನ ನಿಃಪತ್ತಿಯಾಯಿತ್ತು. ಸೌರಾಷ್ಟ್ರ ಸೋಮೇಶ್ವರಲಿಂಗವೆಂಬ ಕುರುಹ ಮರೆದ ಕಾರಣ, ನಿಶ್ಯೂನ್ಯ ನಿರ್ಗಮನವಾಯಿತ್ತು.