Index   ವಚನ - 181    Search  
 
ತತ್ವಮೂವತ್ತಾರ ಮೀರಿ ನಾದಬಿಂದುಕಳಾತೀತನಾದ ಶಿವನು ಜಗನ್ಮಯನಾದ. ಆಗಿಯೂ ಜಗದ ಸ್ಥಿತಿಗತಿ ತನಗಿಲ್ಲವದೆಂತೆಂದಡೆ: ಏಕ ಏವ ಹಿ ಭೂತಾತ್ಮಾ ಭೂತೇಷು ಸುವ್ಯವಸ್ಥಿತಃ ಏಕಧಾ ಬಹುಧಾ ಚೈವ ದೃಶ್ಯತೇ ಜಲಚಂದ್ರವತ್ ಎಂದುದಾಗಿ, ಜಲದೊಳಗೆ ಸೂರ್ಯನ ಪ್ರತಿಬಿಂಬ ವಿಕಾರಿಸುತಿರ್ದಡೇನು? ಆ ವಿಕಾರ ಜಲಕ್ಕಲ್ಲದೆ ಸೂರ್ಯಂಗಿಲ್ಲದಂತಿಪ್ಪನಯ್ಯಾ ಸೌರಾಷ್ಟ್ರ ಸೋಮೇಶ್ವರಾ.