ತನಗೊಬ್ಬರು ಮುನಿದರು ತಾನಾರಿಗೂ ಮುನಿಯಲಾಗದು.
ಮನೆಯ ಕಿಚ್ಚು ಮೊದಲೊಮ್ಮೆ ಮನೆಯ ಸುಡುವಂತೆ
ತನ್ನ ಕೋಪ ತನ್ನನೆ ಸುಡುವುದು ನೋಡಯ್ಯ.
ಸವಿಮಾತುಗಳು ಬೇಗದಿಂದ ಆ ಕ್ರೋಧವ [ಗೆಲಿದಿರ್ಪುದು]
ಸಾಕ್ಷಿ:
ಸಶ್ರುತಃ ಸಾತ್ವಿಕೋ ವಿದ್ವಾನ್ ಸ ತಪಸ್ವೀ ಜಿತೇಂದ್ರಿಯಃ
ಯೇನ ಶಾಂತೇನ ಖಡ್ಗೇನ ಕ್ರೋಧಶತ್ರುರ್ನಿಪಾದಿತಃ
ಇಂತೆಂದುದಾಗಿ, ಆ ಕ್ರೋಧ ದುರ್ಜನರ ಗೆಲುವುದು.
ಇಂತೀ ಸೋತುದಕ್ಕೆ ಸೋತವರ ಕೂಡೆ ಎತ್ತಣ ವಿರೋಧವಯ್ಯ?
ಸೌರಾಷ್ಟ್ರ ಸೋಮೇಶ್ವರನ ಶರಣರು
ಸಚರಾಚರಪ್ರಾಣಿಗಳಲ್ಲಿ ವಿರೋಧವಿಲ್ಲದಿರಬೇಕು.
Art
Manuscript
Music
Courtesy:
Transliteration
Tanagobbaru munidaru tānārigū muniyalāgadu.
Maneya kiccu modalom'me maneya suḍuvante
tanna kōpa tannane suḍuvudu nōḍayya.
Savimātugaḷu bēgadinda ā krōdhava [gelidirpudu]
sākṣi:
Saśrutaḥ sātvikō vidvān sa tapasvī jitēndriyaḥ
yēna śāntēna khaḍgēna krōdhaśatrurnipāditaḥ
intendudāgi, ā krōdha durjanara geluvudu.
Intī sōtudakke sōtavara kūḍe ettaṇa virōdhavayya?
Saurāṣṭra sōmēśvarana śaraṇaru
sacarācaraprāṇigaḷalli virōdhavilladirabēku.