ತನ್ನನೆ ಅರ್ಪಿಸಿಹ ಶರಣಂಗೆ
ಲಿಂಗವೆಂದೂ ಭಿನ್ನವಿಲ್ಲ ನೋಡಯ್ಯಾ.
ಇಂತಪ್ಪ ಶರಣನು ಎಲ್ಲಾ ಸಕಾಯ ಸಹ ಮರಳಿಯೂ
ಲಿಂಗ ಸಹಭೋಜನವ ಮಾಡುವ.
ಇದಕ್ಕೆ ಶ್ರುತಿ:
ಪರಮಂ ಬ್ರಹ್ಮವೇದ ಸ್ಯೋಶ್ನುತೇ ಸರ್ವಾನ್ ಕಾಮಾನ್
ಸಹಬ್ರಹ್ಮಣಾವಿಪಶ್ಚಿತಾ,
ಇಂತೆಂದುದಾಗಿ,
ಸೌರಾಷ್ಟ್ರ ಸೋಮೇಶ್ವರನ ಶರಣರು
ಲಿಂಗದೊಡನೆ ಸಹಭೋಜನವಯ್ಯಾ.
Art
Manuscript
Music
Courtesy:
Transliteration
Tannane arpisiha śaraṇaṅge
liṅgavendū bhinnavilla nōḍayyā.
Intappa śaraṇanu ellā sakāya saha maraḷiyū
liṅga sahabhōjanava māḍuva.
Idakke śruti:
Paramaṁ brahmavēda syōśnutē sarvān kāmān
sahabrahmaṇāvipaścitā,
intendudāgi,
saurāṣṭra sōmēśvarana śaraṇaru
liṅgadoḍane sahabhōjanavayyā.