Index   ವಚನ - 185    Search  
 
ತನು ಒದಗಿದಲ್ಲಿ ಮನವಾಯಿತ್ತು, ಮನ ವೇಧಿಸಿ ಭಾವವಾಯಿತ್ತು, ಭಾವ ವೇಧಿಸಿ ಜ್ಞಾನವಾಯಿತ್ತು, ಜ್ಞಾನ ವೇಧಿಸಿ ಲಿಂಗವಾಯಿತ್ತು, ಲಿಂಗ ವೇಧಿಸಿ ಪರಿಪೂರ್ಣವಾಯಿತ್ತು, ಸೌರಾಷ್ಟ್ರ ಸೋಮೇಶ್ವರ ಎಂಬ ನುಡಿಗೆಡೆ ಇಲ್ಲವಾಯಿತ್ತು.