Index   ವಚನ - 187    Search  
 
ತನುಗುಣ ಮನಗುಣ ಪ್ರಾಣಗುಣಾದಿಗಳಲ್ಲಿ ಹುದುಗಿದಡೆ, ಪಂಚೇಂದ್ರಿಯ ಅರಿಷಡ್ವರ್ಗಂಗಳೊಳು ಮನ ಕೂರ್ತು ಬೆರಸಿದಲ್ಲಿ, ಆ ಮನದ ಹಸ್ತದಲ್ಲಿ ಲಿಂಗವಿಲ್ಲ. ಲಿಂಗವಿಲ್ಲವಾಗಿ ಭಕ್ತಿಯಿಲ್ಲ, ಭಕ್ತಿಯಿಲ್ಲವಾಗಿ ವಿವೇಕವಿಲ್ಲ, ವಿವೇಕವಿಲ್ಲವಾಗಿ ಅರಿವಿಲ್ಲ, ಅರಿವಿಲ್ಲವಾಗಿ ಸುಜ್ಞಾನವಿಲ್ಲ, ಸುಜ್ಞಾನವಿಲ್ಲವಾಗಿ ಪರಮಾರ್ಥ ಘಟಿಸದು. ಇವೆಲ್ಲವ ಕಳೆದುಳಿದಲ್ಲಿ ಮನದ ಹಸ್ತದಲ್ಲಿ ಲಿಂಗವಿದ್ದಿತ್ತು, ಲಿಂಗದಲ್ಲಿ ಮನ ಸಂದಿತ್ತು, ಮನ ಸಂದಲ್ಲಿ ಸೌರಾಷ್ಟ್ರ ಸೋಮೇಶ್ವರ ಸ್ವಸ್ಥಿರವಾದನು.