ತನುವಿನಲ್ಲಿ ಮನ ಜನಿಸಿ,
ಮನದಿಂ ಹಲವು ನೆನಹುಗಳು ಜನಿಸಿದವಲ್ಲದೆ,
ಅವನಿಲ್ಲದಷ್ಟಪುತ್ರರೆಂದೇನು?
ನಡೆ ನುಡಿಯೊಳಗಲ್ಲವೆ ಎನುಹಿರಿ.
ಉರಿಯ ಕಾರಣವೊ?
ಹಿರಿದಪ್ಪ ನೆಳಲು ಮಾತ್ರದಿಂದ ತೋರುವದೊ?
ವ್ಯೋಮದಂಥಾದಲ್ಲ, ಸೀಮೆ ಮುನ್ನಲಿಲ್ಲ.
ನೇಮಿಸುವ ಪರಿಯದೆಂತೊ?
ನಾಮವಿಟ್ಟರಿಯದ ಮುನ್ನ ಅರಿಯಲಿಲ್ಲ,
ಹೇಳಲಿಲ್ಲದುದ ಮುನ್ನ ಕೇಳಲಿಲ್ಲ,
ಪಂಚಾಂಗ ಮಧ್ಯದಲ್ಲಿಪ್ಪ ಮವವಲ್ಲ.
ವಾಙ್ಮನಕ್ಕಗೋಚರವೆಂದ ಬಳಿಕ ನಾಮವಿಡಲಿಲ್ಲ. ಕಾಣಾ,
ನಿಃಕಳಂಕ ಶಾಂತಮಲ್ಲಿಕಾರ್ಜುನ ದೇವರೆಂಬ ನಾಮ
ನಿಶ್ಯಬ್ದದಲ್ಲಿಯರಿ[ಯೆ] ಕಾಣಾ, ಸೌರಾಷ್ಟ್ರ ಸೋಮೇಶ್ವರಾ.
Art
Manuscript
Music
Courtesy:
Transliteration
Tanuvinalli mana janisi,
manadiṁ halavu nenahugaḷu janisidavallade,
avanilladaṣṭaputrarendēnu?
Naḍe nuḍiyoḷagallave enuhiri.
Uriya kāraṇavo?
Hiridappa neḷalu mātradinda tōruvado?
Vyōmadanthādalla, sīme munnalilla.
Nēmisuva pariyadento?
Nāmaviṭṭariyada munna ariyalilla,
hēḷalilladuda munna kēḷalilla,
pan̄cāṅga madhyadallippa mavavalla.
Vāṅmanakkagōcaravenda baḷika nāmaviḍalilla. Kāṇā,
niḥkaḷaṅka śāntamallikārjuna dēvaremba nāma
niśyabdadalliyari[ye] kāṇā, saurāṣṭra sōmēśvarā.