ತಮೋಗುಣವೆಂಬ ಮಯಣದಲ್ಲಿ
ರಜೋಗುಣವೆಂಬ ರಜವನೆತ್ತಿ
ಸತ್ವಗುಣವೆಂಬ ಹಸ್ತದಿಂ ಪಿಡಿದು
ಬೋಧವೆಂಬ ನೇತ್ರದಿಂ ಕಂಡು
ಮಾಯಾ ಜೀವರ ಎರಡೊರೆಗೆ ಸರಿಯೆಂದು ಕಳೆದು
ತ್ರಿವಿಧಾಹಂಕಾರದಲ್ಲಿಯ ತಾಮಸಾಹಂಕಾರವಪ್ಪ ಮಯಣವ
ಶಿವಜ್ಞಾನದಿಂ ಕರಗಿಸಿ, ರಾಜಸಾಹಂಕಾರವಪ್ಪ ರಜವ ತೆಗೆದು,
ಸಾತ್ವಿಕದಲ್ಲಿ ನಿಂದ ದ್ರವ್ಯವಸೌರಾಷ್ಟ್ರ ಸೋಮೇಶ್ವರಂಗಿತ್ತು,
ಮೂಲಾಹಂಕಾರ ನಷ್ಟವಾಯಿತ್ತು.
Art
Manuscript
Music
Courtesy:
Transliteration
Tamōguṇavemba mayaṇadalli
rajōguṇavemba rajavanetti
satvaguṇavemba hastadiṁ piḍidu
bōdhavemba nētradiṁ kaṇḍu
māyā jīvara eraḍorege sariyendu kaḷedu
trividhāhaṅkāradalliya tāmasāhaṅkāravappa mayaṇava
śivajñānadiṁ karagisi, rājasāhaṅkāravappa rajava tegedu,
sātvikadalli ninda dravyavasaurāṣṭra sōmēśvaraṅgittu,
mūlāhaṅkāra naṣṭavāyittu.