ತಲೆಯಿಲ್ಲದ ಕಾಗೆ ನೆಲದಲ್ಲಿ ನಡೆಯಿತ್ತು.
ಹುಲಿ ನಲಿದು ಗಿಲಿಗಿಸಿ ಗೆಜ್ಜೆಗಟ್ಟಿ ಒಲೆದಾಡಿತ್ತು.
ಬಲುಹೆನಿಸಿದ ಕರಡಿ ಹಾಡಿ ಹರಸಿ ಬೆಳೆಯಿತ್ತು.
ಕಾಳರಕ್ಕಸಿಯ ಮಗುವು ಚಂದ್ರಸೂರ್ಯರ ರಾಟಾಳದ
ಹುರಿಯೊಳಗೆ ತಿರಿಗಿತ್ತು.
ಕಳವಳಿಸುವ ಕಪಿಯ ಭೂತ ಹೊಡೆದು,
ಚೋಳೂರೆ ಘಾಳಿಯೊಳು ಸಿಕ್ಕಿ,
ಸೌರಾಷ್ಟ್ರ ಸೋಮೇಶ್ವರನ ಕಾಣದೆ
ಕನ್ನಡಕದ ಕಣ್ಣಿನಂತೆ ಕಣ್ಣೆನಿಸಿ ಕಣ್ಣುಗೆಟ್ಟಿತ್ತು.
Art
Manuscript
Music
Courtesy:
Transliteration
Taleyillada kāge neladalli naḍeyittu.
Huli nalidu giligisi gejjegaṭṭi oledāḍittu.
Baluhenisida karaḍi hāḍi harasi beḷeyittu.
Kāḷarakkasiya maguvu candrasūryara rāṭāḷada
huriyoḷage tirigittu.
Kaḷavaḷisuva kapiya bhūta hoḍedu,
cōḷūre ghāḷiyoḷu sikki,
saurāṣṭra sōmēśvarana kāṇade
kannaḍakada kaṇṇinante kaṇṇenisi kaṇṇugeṭṭittu.