Index   ವಚನ - 204    Search  
 
ತಳದಲೊಂದು ಕೋಲ ಕುಳಿ ಮಾಡಿ, ಮೇಲೊಂದು ಕೋಲ ಮೊನೆ ಮಾಡಿ [ಮಥಿ]ಸಲು ಅಗ್ನಿ ದೃಷ್ಟವಾಗಿ ಕಾಣಿಸಿಕೊಂಬಂತೆ, ಆತ್ಮನ ಸತಿಗೋಲಮಾಡಿ, ಪ್ರಣವವ [ಪ]ತಿಗೋಲ ಮಾಡಿ, ಪ್ರಣವಾತ್ಮಕನು ಶಿವಧ್ಯಾನದಿಂ ಮಥಿಸಲು ಆ ಧ್ಯಾನಪರ್ದಣದಲ್ಲಿ ಶಿವನು ಗೂಢವಿಲ್ಲದೆ ಕಾಣಿಸಿಕೊಂಬನು. ಇದಕ್ಕೆ ಶ್ರುತಿ: ಆತ್ಮಾನಮರಣಿಂ ಕೃತ್ವಾ ಪ್ರಣವಂ ಚೋತ್ತರಾರಣಿಂ ಧ್ಯಾನನಿರ್ಮಥನಾಭ್ಯಾಸಾತ್ಪಾಶಂ ದಹತಿ ಪಂಡಿತಃ ಎಂದುದಾಗಿ ಶಿವಧ್ಯಾನದಿಂ ಸೌರಾಷ್ಟ್ರ ಸೋಮೇಶ್ವರ ಲಿಂಗವ ಕಾಂಬುದಕ್ಕಿದೇ ಬಟ್ಟೆ ಕಂಡಯ್ಯಾ!