Index   ವಚನ - 218    Search  
 
ದೇಹಾಭಿಮಾನವಳಿದು, ಪರಶಿವಜ್ಞಾನವು ಸ್ವಾನುಭಾವಜ್ಞಾನವು ಒಂದೆಯಾಗಿ, ಭಿನ್ನಜ್ಞಾನದ ಬನ್ನವಳಿದು ಅವಿರಳಜ್ಞಾನವಳವಟ್ಟಲ್ಲಿ ಮನವೆಲ್ಲೆಲ್ಲಿಗೆಯ್ದಿದರಲ್ಲಲ್ಲಿಯೇ ಶಿವನು ಸ್ವಯವದೆಂತೆಂದಡೆ, ಇದಕ್ಕೆ ಶ್ರುತಿ: ದೇಹಾಭಿಮಾನೇ ಗಲಿತೇ ವಿಜ್ಞಾತೇಚ ಪದೇ ಶಿವೇ ಯತ್ರ ಯತ್ರ ಮನೋ ಯಾತಿ ತತ್ರ ತತ್ರ ಶಿವಃ ಸ್ವಯಂ ಎಂದುದಾಗಿಇದು ಕಾರಣ ಸೌರಾಷ್ಟ್ರ ಸೋಮೇಶ್ವರನ ಶರಣರು ಸಚ್ಚಿದಾನಂದಭರಿತರು.