ನಾದವೇ ಲಿಂಗ, ಬಿಂದುವೇ ಪೀಠವಾಗಿ
ಶಿವಶಕ್ತಿಸಂಪುಟವಾದ ಪಂಚಮದ ಕರ್ಮೇಶ
ಲಿಂಗನಿರ್ವಯಲ ಪಿಂಡ, ಅಂಗವೆಂಬ ಪಿಂಡ ತದ್ರೂಪವೆನೆಯ್ದಿ
ಪರಿಪೂರ್ಣ ಪಿಂಡಾಕಾಶರೂಪ ತಾನಾಗಿ
ನುಡಿಗೆಡೆ ಇಲ್ಲ[ದೆ] ನಿಂದ ನಿರವಯ ಘನತೇಜ
ಹೋ ಜ್ಯೋತಿಯಂತೆ ಇರ್ದುಯಿಲ್ಲದ ಬೆಡಗಿನ ಭೇದವ
ನಿಮ್ಮಲ್ಲಿಯೇ ಕಂಡೆನಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
Art
Manuscript
Music
Courtesy:
Transliteration
Nādavē liṅga, binduvē pīṭhavāgi
śivaśaktisampuṭavāda pan̄camada karmēśa
liṅganirvayala piṇḍa, aṅgavemba piṇḍa tadrūpaveneydi
paripūrṇa piṇḍākāśarūpa tānāgi
nuḍigeḍe illa[de] ninda niravaya ghanatēja
hō jyōtiyante irduyillada beḍagina bhēdava
nim'malliyē kaṇḍenayyā, saurāṣṭra sōmēśvarā.