ನಾಲ್ಕು ವೇದಂಗಳುಪಮೆ,
ಹದಿನಾರು ಶಾಸ್ತ್ರಂಗಳುಪಮೆ,
ಹದಿನೆಂಟು ಪೌರಾಣ,
ಇಪ್ಪತ್ತೆಂಟು ದಿವ್ಯಾಗಮಂಗಳುಪಮೆ,
ಮೂವತ್ತೆರಡುಪನಿಷತ್ತುಗಳುಪಮೆ,
ಏಳುಕೋಟಿ ಮಹಾಮಂತ್ರಂಗಳುಪಮೆ,
ಅನೇಕ ಶಬ್ದ, ಅನೇಕ ಶಾಸ್ತ್ರ, ಅನೇಕ ತರ್ಕವ್ಯಾಕರಣಂಗಳೆಲ್ಲಾ ಉಪಮೆ,
ಅನೇಕ ಮಂತ್ರ ತಂತ್ರ ಯಂತ್ರಸಿದ್ಧಿ ಬದ್ಧಂಗಳೆಲ್ಲಾ ಉಪಮೆ,
ಚೌಷಷಿ* ವಿದ್ಯಂಗಳುಪಮೆ, ಕಾಣದ ಕಾಂಬುದುಪಮೆ,
ಕೇಳದ್ದ ಕೇಳುವುದುಪಮೆ, ಅಸಾಧ್ಯವ ಸಾಧಿಸುವುದುಪಮೆ,
ಅಭೇದ್ಯವ ಭೇದಿಸುವುದುಪಮೆ,
ಉಪಮೆ ನಿಸ್ಥಲವಾಗಿ ಉಪಮಾಬಂಧನ ಮೀರಿ
ಉಪಮೆ ನಿರುಪಮೆಗಳೆಂಬ ಜಿಗುಡಿನ ಜಿಡ್ಡುಗಳಚಿ
ತರಂಗ ನಿಸ್ತರಂಗಗಳೆಂಬ ಭಾವದ ಸೂತಕವಳಿದು,
ಸೌರಾಷ್ಟ್ರ ಸೋಮೇಶ್ವರನ ನಿಜವನರಿಯದ ಉಪಮಾಬದ್ಧರು,
ಉಪಮೆಯಿಂದುಪಮಿಸಿ ಉಪಮೆ[ಯಿಂ]ದಿಪ್ಪರಯ್ಯಾ.
Art
Manuscript
Music
Courtesy:
Transliteration
Nālku vēdaṅgaḷupame,
hadināru śāstraṅgaḷupame,
hadineṇṭu paurāṇa,
ippatteṇṭu divyāgamaṅgaḷupame,
mūvatteraḍupaniṣattugaḷupame,
ēḷukōṭi mahāmantraṅgaḷupame,
anēka śabda, anēka śāstra, anēka tarkavyākaraṇaṅgaḷellā upame,
anēka mantra tantra yantrasid'dhi bad'dhaṅgaḷellā upame,
cauṣaṣi* vidyaṅgaḷupame, kāṇada kāmbudupame,Kēḷadda kēḷuvudupame, asādhyava sādhisuvudupame,
abhēdyava bhēdisuvudupame,
upame nisthalavāgi upamābandhana mīri
upame nirupamegaḷemba jiguḍina jiḍḍugaḷaci
taraṅga nistaraṅgagaḷemba bhāvada sūtakavaḷidu,
saurāṣṭra sōmēśvarana nijavanariyada upamābad'dharu,
upameyindupamisi upame[yiṁ]dipparayyā.