ನಾಸಿಕಾಗ್ರ ಭ್ರೂನಿಟಿಲ ಮಧ್ಯದೊಳ್ಪ್ರಜ್ವಲಿಸಿ
ಬೆಳಗಿದಸ್ವಯಂಪ್ರಕಾಶಲಿಂಗಕ್ಕೆ
ಆಕಾಶದಿಂದೊಸರ್ದ ಅಗ್ಗವಣಿಯಿಂ ಮಜ್ಜನಂ ಮಾಡಿ,
ಸ್ವಯಾನುಭಾವದಿಂ ಸವೆದ ನಿಜತತ್ವದ ಗಂಧವನಿತ್ತು,
ಪಕ್ಷಾಪಕ್ಷಂಗಳಳಿದ ಅಕ್ಷಯದ ಅಕ್ಷತೆಯಂ ಧರಿಸಿ,
ನೆನಹು ನಿರ್ವಾಣವಾದ ಮನೋಲಯವೆಂಬ ಪುಷ್ಪವನರ್ಪಿಸಿ,
ಭಾವನಿರ್ಭಾವಂಗಳ ಸುಳುಹು ನಷ್ಟವಾದ ಸದ್ಭಾವದ ಧೂಪವನಿಕ್ಕಿ,
ಸಮ್ಯಜ್ಞಾನದಿಂ ಪ್ರಕಾಶಿಸಿ ತೋರ್ಪ ದೀಪಮಂ ಬೆಳಗಿ,
ಬ್ರಹ್ಮರಂಧ್ರದಿಂದೊಸರ್ದು ಪರಿತಪ್ಪ
ಪರಮಾಮೃತವನಾರೋಗಣೆಯನವಧರಿಸಿ,
ಉಲುಹಡಗಿದ ನಿಃಶಬ್ದವೆಂಬ ತಾಂಬೂಲವನ್ನಿತ್ತು,
ಇಂತಪ್ಪ ಅಷ್ಟವಿಧಾರ್ಚನೆಯಿಂದರ್ಚಿಸಿ
ಪರಮ ಪರಿಣಾಮವಿಂಬುಗೊಂಡ
ಪರಮಪ್ರಸಾದವನವಗ್ರಹಿಸಿ ಪರಮಸುಖಿಯಾಗಿಪ್ಪ
ಮಹಾಶರಣರ ತೋರಿ ಬದುಕಿಸಾ, ಸೌರಾಷ್ಟ್ರ ಸೋಮೇಶ್ವರಾ.
Art
Manuscript
Music
Courtesy:
Transliteration
Nāsikāgra bhrūniṭila madhyadoḷprajvalisi
beḷagidasvayamprakāśaliṅgakke
ākāśadindosarda aggavaṇiyiṁ majjanaṁ māḍi,
svayānubhāvadiṁ saveda nijatatvada gandhavanittu,
pakṣāpakṣaṅgaḷaḷida akṣayada akṣateyaṁ dharisi,
nenahu nirvāṇavāda manōlayavemba puṣpavanarpisi,
bhāvanirbhāvaṅgaḷa suḷuhu naṣṭavāda sadbhāvada dhūpavanikki,
samyajñānadiṁ prakāśisi tōrpa dīpamaṁ beḷagi,
brahmarandhradindosardu paritappa
Paramāmr̥tavanārōgaṇeyanavadharisi,
uluhaḍagida niḥśabdavemba tāmbūlavannittu,
intappa aṣṭavidhārcaneyindarcisi
parama pariṇāmavimbugoṇḍa
paramaprasādavanavagrahisi paramasukhiyāgippa
mahāśaraṇara tōri badukisā, saurāṣṭra sōmēśvarā.