ನಿಷ್ಕಲ ಷಟ್‍ಸ್ಥಲಲಿಂಗದ ಮೂಲಾಂಕುರವೆನಿಸುವ ಪರಮ ಕಳೆ,
ಆ ಪರಮ ಕಳೆಯ ಪರಬ್ರಹ್ಮ ಪರಂಜ್ಯೋತಿ
ಪರಾತ್ಪರ ಪರತತ್ವ ಪರಮಾತ್ಮ ಪರಮಜ್ಞಾನ
ಪರಮಚೈತನ್ಯ ನಿಷ್ಕಲ ಚರವೆನಿಸುವ ಪರವಸ್ತುಅದೆಂತೆಂದಡೆ:
ವಾಚಾತೀತಂ ಮನೋತೀತಂ ಭಾವಾತೀತಂ ಚ ತತ್ಪರಂ
ಜ್ಞಾನಾತೀತಂ ನಿರಂಜನಂ ನಿಃಕಲಾಃ ಸೂಕ್ಷ್ಮಭಾವತಃ
ಎಂತೆಂದುದಾಗಿ,ನಿರವಯವಹ ಚರಲಿಂಗದ
ಚೈತನ್ಯವೆಂಬ ಪ್ರಸನ್ನಪ್ರಸಾದಮಂ
ಇಷ್ಟಲಿಂಗಕ್ಕೆ ಕಳಾಸಾನ್ನಿಧ್ಯವಂ ಮಾಡಿ
ಆ ಚರಲಿಂಗದ ಸಮರಸ ಚರಣಾಂಬುವಿಂ ಮಜ್ಜನಕ್ಕೆರೆದು
ನಿಜಲಿಂಗೈಕ್ಯವನೆಯ್ದಲರಿಯರು.ಅದೆಂತೆಂದಡೆ:
ಹಸ್ತಪೀಯೋಠೇ ನಿಜಮಿಷ್ಟಲಿಂಗಂ
ವಿನ್ಯಸ್ಯ ತಲ್ಲೀನ ಮನಃ ಪ್ರಚಾರಃ
ಬಾಹ್ಯಕ್ರಿಯಾಸಂಕುಲನಿಃಸ್ಪೃಹಾತ್ಮಾ
ಸಂಪೂಜಯತ್ಯಂಗ ಸ ವೀರಶೈವಃ
ಆವನಾನೋರ್ವನು ಕರಪೀಠದಲ್ಲಿ
ತನ್ನ ಶ್ರೀಗುರು ಕೊಟ್ಟ ಪ್ರಾಣಲಿಂಗವನ್ನು ಇರಿಸಿ,
ಆ ಶಿವಲಿಂಗದಲ್ಲಿ ಮನವನೆಯ್ದಿದ
ಮನಃಸಂಚಾರವುಳ್ಳಾತನಾಗಿ
ಹೊರಗಣ ಕ್ರಿಯಾಸಮೂಹದಲ್ಲಿ
ಬಯಕೆಯಳಿದು ಬುದ್ಧಿಯುಳ್ಳಾತನಾಗಿ
ತನ್ನ ಪ್ರಾಣಲಿಂಗಮಂ ಪೂಜಿಸುತ್ತಿಹನು.
ಆ ಪ್ರಾಣಲಿಂಗಾರ್ಚಕನಾದ ಲಿಂಗಾಂಗಸಂಬಂಧಿಯೇ
ವೀರಶೈವನೆಂದರಿವುದು.ಅದೆಂತೆಂದಡೆ:
ಕಂಡವರ ಕಂಡು ತೀರ್ಥದಲ್ಲಿ ಮಂಡೆಯ ಬೋಳಿಸಿಕೊಂಬ ಭಂಡರ
ಮೆಚ್ಚುವರೆಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು.
Art
Manuscript
Music
Courtesy:
Transliteration
Niṣkala ṣaṭsthalaliṅgada mūlāṅkuravenisuva parama kaḷe,
ā parama kaḷeya parabrahma paran̄jyōti
parātpara paratatva paramātma paramajñāna
paramacaitan'ya niṣkala caravenisuva paravastu'adentendaḍe:
Vācātītaṁ manōtītaṁ bhāvātītaṁ ca tatparaṁ
jñānātītaṁ niran̄janaṁ niḥkalāḥ sūkṣmabhāvataḥ
entendudāgi,niravayavaha caraliṅgada
caitan'yavemba prasannaprasādamaṁ
iṣṭaliṅgakke kaḷāsānnidhyavaṁ māḍi
ā caraliṅgada samarasa caraṇāmbuviṁ majjanakkereduNijaliṅgaikyavaneydalariyaru.Adentendaḍe:
Hastapīyōṭhē nijamiṣṭaliṅgaṁ
vin'yasya tallīna manaḥ pracāraḥ
bāhyakriyāsaṅkulaniḥspr̥hātmā
sampūjayatyaṅga sa vīraśaivaḥ
āvanānōrvanu karapīṭhadalli
tanna śrīguru koṭṭa prāṇaliṅgavannu irisi,
ā śivaliṅgadalli manavaneydida
manaḥsan̄cāravuḷḷātanāgiHoragaṇa kriyāsamūhadalli
bayakeyaḷidu bud'dhiyuḷḷātanāgi
tanna prāṇaliṅgamaṁ pūjisuttihanu.
Ā prāṇaliṅgārcakanāda liṅgāṅgasambandhiyē
vīraśaivanendarivudu.Adentendaḍe:
Kaṇḍavara kaṇḍu tīrthadalli maṇḍeya bōḷisikomba bhaṇḍara
meccuvaresaurāṣṭra sōmēśvarā, nim'ma śaraṇaru.