Index   ವಚನ - 239    Search  
 
ನೆಲದ ಮೇಲಣ ನಿಧಾನವ ಕಂಡವರಲ್ಲದೆ ಆಕಾಶದೊಳಗೆ ಹೂಳಿರ್ದ ನಿಕ್ಷೇಪವ ಕಂಡವರಾರನೂ ಕಾಣೆ. ಖೇಚರಿಯ ಮುದ್ರೆಯಿಂದ ಗಗನದ ನಿಧಿಯನೆ ಕಂಡು ಆ ನಿದ್ಥಿಯೊಳಗೆ ನಿಧಾನವಾಗಿರಬಲ್ಲಡೆ ಸೌರಾಷ್ಟ್ರಸೋಮೇಶ್ವರಲಿಂಗ ಬೇರಿಲ್ಲ ಕಾಣಿರೆ,