ಪಂಚಬ್ರಹ್ಮದಿಂದಾದುದಲ್ಲ,ಸಂಚಿತ, ಪ್ರಾರಬ್ಧ,
ಆಗಾಮಿಯನುಳ್ಳುದಲ್ಲ.
ಸಚ್ಚಿದಾನಂದಮಯವಾದಾತ್ಮನನಿಂತೀ ಪರಿಯಲ್ಲಿ
ತಿಳಿದು ನೋಡಯ್ಯಾ.
ತಾ ಹುಟ್ಟಿ ತಮ್ಮವ್ವೆಯ ಬಂಜೆ ಎಂಬವನಂತೆ,
ಹೊತ್ತುದ ಹುಸಿ ಮಾಡುವ ಪರಿಯ ನೋಡಾ.
ಅವನಿಲ್ಲದಷ್ಟಪುತ್ರರುಂಟೆ?
ಸೌರಾಷ್ಟ್ರ ಸೋಮೇಶ್ವರಲಿಂಗವಿಲ್ಲದಿರಲು
ಆನೂ ನೀನೂ ಉಂಟೆ ಹೇಳಾ, ಮಲ್ಲಿಕಾರ್ಜುನಾ?
Art
Manuscript
Music
Courtesy:
Transliteration
Pan̄cabrahmadindādudalla,san̄cita, prārabdha,
āgāmiyanuḷḷudalla.
Saccidānandamayavādātmananintī pariyalli
tiḷidu nōḍayyā.
Tā huṭṭi tam'mavveya ban̄je embavanante,
hottuda husi māḍuva pariya nōḍā.
Avanilladaṣṭaputraruṇṭe?
Saurāṣṭra sōmēśvaraliṅgavilladiralu
ānū nīnū uṇṭe hēḷā, mallikārjunā?