Index   ವಚನ - 246    Search  
 
ಪಂಚಬ್ರಹ್ಮದಿಂದೊಗೆದ ಪಂಚಭೂತಾಂಶದ ಪಂಚೇಂದ್ರಿಯಂಗಳಲ್ಲಿ ಪಂಚಲಿಂಗಂಗಳಳವಟ್ಟು, ಪಂಚವಿಷಯಂಗಳು ಲಿಂಗಸಂಗವ ಮಾಡಿದ ಕಾರಣ ಮಲ ಕರ್ಮ ಮೊದಲಾದ ಸರ್ವಸೂತಕ ನಿವೃತ್ತಿಯಾಗಿ ಸೌರಾಷ್ಟ್ರ ಸೋಮೇಶ್ವರಲಿಂಗಕ್ಕೆ ತೃಪ್ತಿಯಾಯಿತ್ತು.