Index   ವಚನ - 252    Search  
 
ಪರಮಜ್ಞಾನಕ್ಕೆ ಕರ್ತೃವಾದ ಸದಾಶಿವನೆ ಜೀವಭಾವದಿಂ ಪ್ರಪಂಚಿನ ಘಟದಿಂದೈದೆನುವಪ್ಪ ಪಂಚೇಂದ್ರಿಯಗಳ ಪಂಚವಿಷಯಂಗಳನರಿತರ್ಪಿಸಿ ತೃಪ್ತಿಯನೆಯ್ದಿ, ಆ ಜೀವನು ಅಂಡಜ ಸ್ವೇದಜ ಉದ್ಬಿಜ ಜರಾಯುಜಂಗಳೆಂಬ ಚತುರ್ವಿಧವರ್ಗಂಗಳೊಳು ಚತುರ್ದಶಭುವನದೊಳುದಯಿಸಿ, ಸ್ತ್ರೀ[ಪುಂನ]ಪುಂಸಕಾದಿಯಿಂ ಜನಿಸಿ, ಗಳಿಂ ದೃಶ್ಯಮಾಗಿ ಯಸ್ಯ ಏವಂ ಆ ಮುನ್ನಿನ ಪರಮಜ್ಞಾನದಿಂದ ಜೀವನು ಸದಾ ಶಿವನಾದುದಕ್ಕೆ ಶ್ರುತಿ: ಯಥಾ ಖಲು ವೈ ಧೇನು ತೀರ್ಥೇ ತರ್ಪಯತಿ ಏವಮಗ್ನಿ ಹೋತ್ರೀ ಯಜಮಾನಂ ತರ್ಪಯತಿ ಯಸ್ಯ ಪ್ರಜಯಾ ಪಶುಭಿಃ ಪ್ರತುಷ್ಯತಿ ಸುವರ್ಗಂ ಲೋಕಂ ಪ್ರಜಾನಾತಿ ಪ್ರಶ್ಯತಿ ಪುತ್ರ ಪೌತ್ರಂ ಪ್ರವ್ರಜಯಾ ಪಶುಭಿರ್ಮಿಥುನೈರ್ಜಾಯತೇ ಯಸ್ಯೇನಂ ವಿದುಷೋ [s]ಹೋತ್ರಂ ಏವಂ ವೇದ ಇಂತೆಂದುದಾಗಿ, ಸೌರಾಷ್ಟ್ರ ಸೋಮೇಶ್ವರಲಿಂಗ ಶಿವನಾಗಬಲ್ಲ ಜಗವಾಗಬಲ್ಲಯ್ಯಾ ಜೀವವಾಗಬಲ್ಲಯ್ಯಾ