Index   ವಚನ - 253    Search  
 
ಪರಶಿವನೆ ಅಪ[ರ]ಸ್ವರೂಪನಾಗಿ ಗುರುಸಾಂಪ್ರದಾಯಕನಾದನಾ ಸದ್ಗುರು, ಸರ್ವಕಾರಣನು. ಭೋಗಮೋಕ್ಷೋಪಾಯವನೀವ ನಿತ್ಯನು. ಆ ಸದ್ಗುರುವೆ ಪಂಚಸಂಜ್ಞೆಯೆನಿಸುವ ಪರಬ್ರಹ್ಮಸ್ವರೂಪನು ತಾನೆ, ಸೌರಾಷ್ಟ್ರ ಸೋಮೇಶ್ವರನು ಶಿಷ್ಯಕಾರಣನು.