Index   ವಚನ - 256    Search  
 
ಪರಿಯಾಣವೇ ಭಾಜನವೆಂಬರು. ಪರಿಯಾಣ ಭಾಜನವೇ? ಅಲ್ಲ. ಘನಲಿಂಗಕ್ಕೆ ಶುದ್ಧ ನಿರ್ಮಲವಾದ ಸಕಲಕರಣಂಗಳೇ ಭಾಜನ. ನಿಜಾನಂದವೇ ಭೋಜನ. ಪರಿಣಾಮವೇ ಪ್ರಸಾದ. ಇಂತಿವರಲ್ಲಿ ನಿರುತನಾಗಿರಬಲ್ಲ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣ.