ಪುತ್ರೇಷಣ ವಿತ್ತೇಷಣ ದಾರೇಷಣಂಗಳೆಂಬ ಈಷಣತ್ರಯವನುಳಿದು
ಅಸಿ ಮಸಿ ಕೃಷಿ ವಾಣಿಜ್ಯಗಳೆಂಬ ವ್ಯಾಪಾರ ಪಾರಂಗತನಾಗಿ
ಸಂಸಾರ ಸ್ಪೃಹೆಯನುಳಿದು ನಿಸ್ಪೃಹನಾಗಿ,
ರಕ್ತ ಅನುರಕ್ತ ಅತಿರಕ್ತವೆಂಬ ರಕ್ತತ್ರಯಗೆಟ್ಟು ವಿರಕ್ತನಾಗಿ
ಸಗುಣದಲ್ಲಿ ಸಲ್ಲದೆ ನಿರ್ಗುಣದಲ್ಲಿ ನಿಲ್ಲದೆ
ಸಗುಣ ನಿರ್ಗುಣಕ್ಕುಪಮಾತೀತವಾದ ಶಿವಲಿಂಗಾಂಗಿ
ಸೌರಾಷ್ಟ್ರ ಸೋಮೇಶ್ವರಲಿಂಗವಾದುದೆನ್ನ ಇಷ್ಟ.
Art
Manuscript
Music
Courtesy:
Transliteration
Putrēṣaṇa vittēṣaṇa dārēṣaṇaṅgaḷemba īṣaṇatrayavanuḷidu
asi masi kr̥ṣi vāṇijyagaḷemba vyāpāra pāraṅgatanāgi
sansāra spr̥heyanuḷidu nispr̥hanāgi,
rakta anurakta atiraktavemba raktatrayageṭṭu viraktanāgi
saguṇadalli sallade nirguṇadalli nillade
saguṇa nirguṇakkupamātītavāda śivaliṅgāṅgi
saurāṣṭra sōmēśvaraliṅgavādudenna iṣṭa.