ಪ್ರಾಣದ ಮೇಲೆ ಪ್ರಾಣಲಿಂಗ ಸ್ವಾಯತವಾದ ಬಳಿಕ
ಪ್ರಾಣಗುಣವಳಿದು, ಪ್ರಕೃತಿ ಹಿಂಗಿ,
ದೇಹೇಂದ್ರಿಯ ಕರಣ ಜೀವಭಾವ ಅರಿವು
ಶಬ್ದ ಸ್ಪರ್ಶ ರೂಪು ರಸ ಗಂಧ ಸ್ರಕ್ಚಂದನ
ವನಿತಾದಿ ಅಷ್ಟಭೋಗಂಗಳು ಲಿಂಗದಲ್ಲಿ ಮನಮುಟ್ಟಿ ನಟ್ಟಿರಲು
ಅದೇ ಅರ್ಪಿತಾಂಗ ಲಿಂಗಾರ್ಪಿತವಾಗಿ,
ಪರಿಣಾಮಪ್ರಸಾದಸಾಹಿತ್ಯವಯ್ಯಾ
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣಂಗೆ.