Index   ವಚನ - 272    Search  
 
ಬದ್ಧನಲ್ಲ ಮುಕ್ತನಲ್ಲ, ಎರಡಿಲ್ಲವಾಗಿ ಸಹಜಭರಿತನಯ್ಯಾ. ಮನ ಭಾವ ಕರಣಂಗಳು ಲಿಂಗವ ಸೋಂಕಿ, ನೆನಹುಗೆಟ್ಟು, ಸಂದು ನಷ್ಟವಾದ ಅಚಲಲಿಂಗೈಕ್ಯಂಗೆ ಮತ್ತಾವಂಗವೂ ಇಲ್ಲ. ನಿರಂಜನ ನಿಃಪ್ರಾಣ ಶಿಖಿಕರ್ಪುರಯೋಗದಂತೆ ಸೌರಾಷ್ಟ್ರ ಸೋಮೇಶ್ವರನಲ್ಲಿ ಲಿಂಗೈಕ್ಯವು.