ಬಸವಣ್ಣನ ಭಕ್ತಿಸ್ಥಲ, ಮಡಿವಾಳ
ಮಾಚಣ್ಣನ ಮಾಹೇಶ್ವರಸ್ಥಲ,
ಘಟ್ಟಿವಾಳ ಮುದ್ದಣ್ಣನ ಪ್ರಸಾದಿಸ್ಥಲ,
ಚನ್ನಬಸವಣ್ಣನ ಪ್ರಾಣಲಿಂಗಿಸ್ಥಲ,
ಪ್ರಭುವಿನ ಶರಣಸ್ಥಲ, ಸೊಡ್ಡಳ ಬಾಚರಸರ ಐಕ್ಯಸ್ಥಲ,
ಅಜಗಣ್ಣನ ಆರೂಢ, ನಿಜಗುಣನ ಬೆರಗು,
ಅನುಮಿಷನ ನಿಶ್ಚಲ, ಮಹದೇವಿಯಕ್ಕನ ಜ್ಞಾನ,
ನಿಂಬಿಯಕ್ಕನ ನಿಶ್ಚಯ, ಮುಕ್ತಾಯಕ್ಕನ ಅಕ್ಕರು,
ಸತ್ಯಕ್ಕನ ಯುಕ್ತಿ, ಅಲ್ಲಾಳಿಯಕ್ಕನ ಸಮತೆ,
ರೇವಣಸಿದ್ಧಯ್ಯದೇವರ ನಿಷೆ*, ಸಿದ್ಧರಾಮತಂದೆಗಳ ಮಹಿಮೆ,
ಮರುಳಸಿದ್ಧಯ್ಯದೇವರ ಅದೃಷ್ಟ ಪ್ರಸಾದನಿಷೆ*,
ಏಕೋರಾಮಯ್ಯಗಳ ಆಚಾರನಿಷೆ*,
ಪಂಡಿತಾರಾಧ್ಯರ ಸ್ವಯಂಪಾಕ,
ಮುಗ್ಧಸಂಗಯ್ಯ, ಮೈದುನ ರಾಮಣ್ಣ, ಬೇಡರ ಕಣ್ಣಪ್ಪ,
ಕೋಳೂರ ಕೊಡಗೂಸು, ತಿರುನೀಲಕ್ಕರು,
ರುದ್ರಪಶುಪತಿಗಳು, ದೀಪದ ಕಲಿಯಾರ ಮುಗ್ಧಭಕ್ತಿ
ನಿಮ್ಮೊಳೆನಗೆಂದಪ್ಪುದೊ ಸೌರಾಷ್ಟ್ರ ಸೋಮೇಶ್ವರಾ.
Art
Manuscript
Music
Courtesy:
Transliteration
Basavaṇṇana bhaktisthala, maḍivāḷa
mācaṇṇana māhēśvarasthala,
ghaṭṭivāḷa muddaṇṇana prasādisthala,
cannabasavaṇṇana prāṇaliṅgisthala,
prabhuvina śaraṇasthala, soḍḍaḷa bācarasara aikyasthala,
ajagaṇṇana ārūḍha, nijaguṇana beragu,
anumiṣana niścala, mahadēviyakkana jñāna,
nimbiyakkana niścaya, muktāyakkana akkaru,
satyakkana yukti, allāḷiyakkana samate,
rēvaṇasid'dhayyadēvara niṣe*, sid'dharāmatandegaḷa mahime,
Maruḷasid'dhayyadēvara adr̥ṣṭa prasādaniṣe*,
ēkōrāmayyagaḷa ācāraniṣe*,
paṇḍitārādhyara svayampāka,
mugdhasaṅgayya, maiduna rāmaṇṇa, bēḍara kaṇṇappa,
kōḷūra koḍagūsu, tirunīlakkaru,
rudrapaśupatigaḷu, dīpada kaliyāra mugdhabhakti
nim'moḷenagendappudo saurāṣṭra sōmēśvarā.