Index   ವಚನ - 280    Search  
 
ಬುದ್ಧಿಯೊಡನೆ ಸಂಬಂಧವಾದ ಪುಣ್ಯಪಾದ ರೂಪವೆ ಸಂಚಿತ ಪ್ರಾರಬ್ಧ ಆಗಾಮಿತನದ ವಾಸನೆ ಆದುಳ್ಳನ್ನಕ್ಕಹುಟ್ಟುಹೊಂದು ನಟ್ಟುನಿಂದು ಬಿಟ್ಟು ತೊಲಗದಿಪ್ಪುದು ನೋಡಯ್ಯಾ. ಶಿವಪ್ರಸಾದ ಪ್ರಸಾದಿಸಲೊಡನೆ ಕರ್ಮಕ್ಷಯ. ಆ ಕರ್ಮಕ್ಷಯದೊಡನೆ ಬುದ್ಧಿಯಳಿವು. ಇಂತು ಬುದ್ಧಿ ಕರ್ಮವೆರಡರ ಅಳಿವು ಶಿಖಿಕರ್ಪುರದಳಿವಿನಂತೆ. ಅಳಿದ ಸಮನಂತರದಲ್ಲಿ ಮೋಕ್ಷ ಕಾಣಿಸಿಕೊಂಬುದು. ಇದಕ್ಕೆ ಶ್ರುತಿ: ``ತಸ್ಯ ಕರ್ಮಾಣಿ ತಾವದೇವ ಚಿರಂ ಏವಂ ನ ವಿಮೋಕ್ಷ್ಯ ಅಧಸ್ತ್ವಂ ಪಶ್ಯನ್ ಇಂತೆಂದುದಾಗಿ, ಸೌರಾಷ್ಟ್ರ ಸೋಮೇಶ್ವರಲಿಂಗದ ಪ್ರಸಾದ ಅಪೂರ್ವವಯ್ಯಾ.