ಬೆಟ್ಟದ ಮೇಲೋಂದು ದಳ್ಳುರಿ ನಿಮುರಿ ಬಳ್ಳಿವರಿದು
ಆಕಾಶಕ್ಕಡರಿ ಜಗದೊಳ್ಪಸರಿಸಿ ಸಪ್ತಸಮುದ್ರಂಗಳ ನುಂಗಿತ್ತು,
ಅಷ್ಟದಿಗುದಂತಿಗಳ ಸುಟ್ಟುರುಪಿತ್ತು, ಪಂಚವಕ್ತ್ರಂಗಳ ಮುಖಗೆಡಿಸಿತ್ತು,
ನವಬ್ರಹ್ಮರ ಸುಳುಹನಾರಡಿಗೊಂಡಿತ್ತು.
ಸಮ್ಯಜ್ಞಾನವಪ್ಪ ದಳ್ಳುರಿ
ಸೌರಾಷ್ಟ್ರ ಸೋಮೇಶ್ವರನ ತೋರಿ ಭವಗೆಡಿಸಿತ್ತು.
Art
Manuscript
Music
Courtesy:
Transliteration
Beṭṭada mēlōndu daḷḷuri nimuri baḷḷivaridu
ākāśakkaḍari jagadoḷpasarisi saptasamudraṅgaḷa nuṅgittu,
aṣṭadigudantigaḷa suṭṭurupittu, pan̄cavaktraṅgaḷa mukhageḍisittu,
navabrahmara suḷuhanāraḍigoṇḍittu.
Samyajñānavappa daḷḷuri
saurāṣṭra sōmēśvarana tōri bhavageḍisittu.