ಬೇರು ಮೊದಲಾಗಿ ಚರಿಸುವ ವೃಕ್ಷದೊಳಗೆ
ಹತ್ತು ಶಾಖೆಯಲ್ಲಿ ನಾಲ್ಕು ಹಣ್ಣಹುದ ಕಂಡೆ.
ಒಂದು ಹಣ್ಣ ಸವಿದಾತ ಯೋಗಿಯಾದ,
ಒಂದು ಹಣ್ಣ ಸವಿದಾತ ಭೋಗಿಯಾದ,
ಒಂದು ಹಣ್ಣ ಸವಿದಾತ ಧರ್ಮಿಯಾದ,
ಮತ್ತೊಂದು ಹಣ್ಣ ಸವಿದಾತ ಧರ್ಮಿಯಾದ,
ಮತ್ತೊಂದು ಹಣ್ಣ ಸವಿದಾತನ ಕುರಹ ಕಂಡು ಹೇಳಿರೆ.
ಈ ನಾಲ್ಕು ಹಣ್ಣ ಮೆದ್ದವರ ಕೊರಳಲ್ಲಿ ಬಿತ್ತು ಗಂಟ[ಲೋಳು] ಸಿಕ್ಕಿ
ಕಾನನದಲ್ಲಿ ತಿರುಗುತಿದ್ದರಯ್ಯಾ.
ಈ ಫಲವ ದಾಂಟಿದವರು
ಸೌರಾಷ್ಟ್ರ ಸೋಮೇಶ್ವರ
ಹುಟ್ಟುಗೆಟ್ಟರು.