Index   ವಚನ - 285    Search  
 
ಬ್ರಹ್ಮನೆ ಬಟ್ಟಲು ವಿಷ್ಣುವೆ ನೇಣು ರುದ್ರನೆ ತೊಲೆ, ಈ ಮೂವರು ಕೂಡಿದ ತ್ರಾಸಿನಲ್ಲಿ ಬ್ರಹ್ಮಾಂಡವೆಂಬ ಘಟ್ಟಗೆ ಪಿಂಡವೆಂಬ ಕಟ್ಟೆಳೆಯನಿಕ್ಕಿ ತೂಗುವೆನಯ್ಯಾ. ಮುಳ್ಳು ಸರಿಸವಾಗಿ ತೂಗುವೆನಯ್ಯಾ. ಚಂದ್ರ ಸೂರ್ಯರೋಂದಾದ ಮಚ್ಚವನೋರೆದು ಪರಾಪರದ ಬಣ್ಣಕ್ಕೆ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರಲ್ಲಿ.