ಬ್ರಹ್ಮಸ್ಥಾನದಲ್ಲಿ ಜ್ಯೋತಿಲಿಂಗವಿಪ್ಪುದನರಿತು,
ಕ್ರೀವೆರಸಿ ನಿಃಕ್ರಿಯಲ್ಲಿ ನಿಂದು
ಕ್ರಮದಿಂದೂದ್ವಱಕೆಯ್ದಲು ಮಹಾಲಿಂಗದ ಬೆಳಗು,
ಪ್ಋಥ್ವಿಯಂ ಮುಸುಕಿ ಅಪ್ಪುವನೀಂಟಿ,ಅಗ್ನಿಯಂ ದಹಿಸಿ,
ವಾಯುವಂ ನುಂಗಿ, ಅಕಾಶಕ್ಕಳವಲ್ಲದೆ
ಸ್ಥಲನಿಶ್ಚಲವನೆ ಶೂನ್ಯಾವಸ್ಥೆಯಲ್ಲಿ ನಿಂದ ನಿಲವ
ಸ್ಔರಾಷ್ಟ್ರ ಸೋಮೇಶ್ವರ, ನಿಮ್ಮ ಶರಣರಲ್ಲದೆ
ಅರಿವು ಮರಹೋನೋಳಂಡಿಪ್ಪ
ಅಜ್ಙಾನಿಗಳೆತ್ತ ಬಲ್ಲರಯ್ಯಾ?
Art
Manuscript
Music
Courtesy:
Transliteration
Brahmasthānadalli jyōtiliṅgavippudanaritu,
krīverasi niḥkriyalli nindu
kramadindūdvaṟakeydalu mahāliṅgada beḷagu,
pr̥thviyaṁ musuki appuvanīṇṭi,agniyaṁ dahisi,
vāyuvaṁ nuṅgi, akāśakkaḷavallade
sthalaniścalavane śūn'yāvastheyalli ninda nilava
saurāṣṭra sōmēśvara, nim'ma śaraṇarallade
arivu marahōnōḷaṇḍippa
ajṅānigaḷetta ballarayyā?