ಭವಿಯೊಂದು ಕುಲ ಭಕ್ತನೊಂದು ಕುಲವೆಂಬ
ಭಂಗದ ಮಾತ ಕೇಳಲಾಗದು.
ಅದೇನು ಕಾರಣವೆಂದಡೆ, ಭವಿಭಕ್ತಂಗೆ ಸಂಬಂಧ ಉಂಟಾದ ಕಾರಣ.
ಇದಕ್ಕೆ ಶ್ರುತಿ:
'ಭಕ್ತಾನಾಂ ಭವಿಸಂಪರ್ಕೋ ಭವೀನಾಂ ಭಕ್ತಸಂಶ್ರಯಃ
ಭವಿಭಕ್ತಾವುಭೌದೇವೀ ಮದ್ಭಕ್ತೌ ಚ ಪ್ರಕೀರ್ತಿತೌ
ಇಂತೆಂದುದಾಗಿ,
ಶಿವಪ್ರಸಾದ ಭವಿಗೆ, ಭವಿಯ ಪ್ರಸಾದ ಭಕ್ತಂಗೆ.
ಇದು ಕಾರಣ ಸೌರಾಷ್ಟ್ರ ಸೋಮೇಶ್ವರನಲ್ಲಿ ಭಕ್ತರಾದಡೆ
ಭವಿಯಾಗಿರಬೇಕಯ್ಯಾ.