ಮನದ ನಯನದಿಂದ ಕಂಡು
ಕಾಯಭಾವ ಸ್ಪರ್ಶನ ಹಿಂಗಿ,
ಲಿಂಗಸ್ಪರ್ಶನದ ಸಕೀಲವನರಿತು,
ಪ್ರಾಣಸ್ಪರ್ಶನ ಪ್ರಸಾದಸೇವ್ಯ ನಿರುಪಮತೃಪ್ತಿ ತ್ರಿಪುಟಿಸಂಕಲ್ಪದ
ಅರ್ಪಿತವ ಮೀರಿದಚ್ಚಪ್ರಸಾದಗ್ರಾಹಕ
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ.
Art
Manuscript
Music
Courtesy:
Transliteration
Manada nayanadinda kaṇḍu
kāyabhāva sparśana hiṅgi,
liṅgasparśanada sakīlavanaritu,
prāṇasparśana prasādasēvya nirupamatr̥pti tripuṭisaṅkalpada
arpitava mīridaccaprasādagrāhaka
saurāṣṭra sōmēśvarā nim'ma śaraṇa.