ಮನ ಮುಕ್ತನಾದ ಶರಣ ತಾನೆ ಲಿಂಗವಾಗಿ
ಪ್ರಾಣ ಮುಕ್ತನು ನೋಡಯ್ಯಾ.
ಪ್ರಸಾದಸನ್ನಹಿತವಾಗಿ ಕಾಯಮುಕ್ತನು.
ಅದೆಂತೆಂದಡೆ:
ಸ್ವಲಿಂಗೀ ಪ್ರಾಣಮುಕ್ತಸ್ಯಾತ್ ಮನೋಮುಕ್ತಸ್ತು ಜಂಗಮಃ
ಪ್ರಸಾದೀ ಕಾಯಮುಕ್ತಶ್ಚ ತ್ರಿವಿಧಸ್ತತ್ವನಿಶ್ಚಯಃ
ಎಂದುದಾಗಿ, ಇಂತೀ ತ್ರಿವಿಧಮುಕ್ತನಾಗಿ
ನಿರ್ಮಲ ನಿರ್ಮಾಯ ಸತ್ಯಜ್ಞಾನಾನಂದಭರಿತ
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ.
Art
Manuscript
Music
Courtesy:
Transliteration
Mana muktanāda śaraṇa tāne liṅgavāgi
prāṇa muktanu nōḍayyā.
Prasādasannahitavāgi kāyamuktanu.
Adentendaḍe:
Svaliṅgī prāṇamuktasyāt manōmuktastu jaṅgamaḥ
prasādī kāyamuktaśca trividhastatvaniścayaḥ
endudāgi, intī trividhamuktanāgi
nirmala nirmāya satyajñānānandabharita
saurāṣṭra sōmēśvarā nim'ma śaraṇa.