ಮನವೆ ಮಹ, ತನುವೆ ಪೃಥ್ವಿ,
ಇನಿತಾವ ಎಡೆಯಲ್ಲಿ ಆತ್ಮನಿಹುದೋ ?
ಸಾಗರದ ಹಾಗಲ್ಲ ಮೇಘದ ಪರ್ಯಾಯವಲ್ಲ
ನೀನರಿಯದ ತೆರನಲ್ಲ
ಆದ ಹಿರಿದುಮಾಡಿ ಒರೆಯಲೇಕಯ್ಯಾ ?
ನಿಃಕಳಂಕಶಾಂತಮಲ್ಲಿಕಾರ್ಜುನ ದೇವರಿಲ್ಲವೆಂಬವಂಗೆ
ಆತ್ಮನಿಂದೇನು ? ಸೌರಾಷ್ಟ್ರ ಸೋಮೇಶ್ವರಾ,
ಮಾತಿಂಗೆ ಮರುಳಾದವರುಂಟೆ ?
Art
Manuscript
Music
Courtesy:
Transliteration
Manave maha, tanuve pr̥thvi,
initāva eḍeyalli ātmanihudō?
Sāgarada hāgalla mēghada paryāyavalla
nīnariyada teranalla
āda hiridumāḍi oreyalēkayyā?
Niḥkaḷaṅkaśāntamallikārjuna dēvarillavembavaṅge
ātmanindēnu? Saurāṣṭra sōmēśvarā,
mātiṅge maruḷādavaruṇṭe?