Index   ವಚನ - 302    Search  
 
ಮನ ಸೋಂಕಿದ ಸುಖವನೊಂದು ಶ್ರುತಕ್ಕೆ ತಂದಡೆ ಅದು ಬಹುವಾರ್ತೆಯಾಯಿತ್ತು ನೋಡಾ, ಅಯ್ಯಾ. ತನುವಿನಲ್ಲಿ ಸೋಂಕಿದ ಸುಖವು ತನಗಲ್ಲದೆ ಇದಿರಿನ ದೃಕ್ಕಿಗೆ ದೃಶ್ಯವಪ್ಪುದೆ, ಅಯ್ಯಾ ? ತನ್ನಲ್ಲಿ ತಾನು ತದುಗತವಾದ ಶರಣನ ಇರವು ಉರಿವುಂಡ ಕರ್ಪುರದಂತೆ, ಬಿಸಿಲುಂಡ ಅರಿಸಿನದಂತೆ, ಕಬ್ಬುನ ಉಂಡ ಉದಕದಂತೆ, ಆರಿಗೂ ಭೇದಿಸಬಾರದು ಕೇಳಾ, ಅಯ್ಯಾ ? ಇದಕ್ಕೆ ಶ್ರುತಿ: ``ಅಗಣಿತಮಪ್ರಮೇಯಮತಕ್ರ್ಯ ನಿರುಪಾಧಿಕಂ ಅನಾಮಯನಿರಂಜನ್ಯಂ ಅತ್ಯತಿಷ್ಠದ್ದಶಾಂಗುಲಂ ಇಂತೆಂದುದಾಗಿ, ಸೌರಾಷ್ಟ್ರ ಸೋಮೇಶ್ವರಾ, ಶರಣರ ಅಂತಿತೆನಬಾರದಯ್ಯಾ.